ಲಾ ಪ್ಲು ಜೋಲಿ .. ಚಿಗರಿಗಂಗಳ ಚೆಲುವಿಯರು
ಮಿ ಸ್ ಆಫ್ರಿಕಾ ಬೆಂಗಳೂರು ಕಿರೀಟಕ್ಕಾಗಿ ಕೃಷ್ಣೆಯರ
ಪೈಪೋಟಿ. ..
“ಬಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವಿ ನೀನೇಕೆ?
ಕಂಪಿನ ಕರೆಯಿದು
ಸರಾಗವಾಗಿರೆ
ಬೇರೆಯ ಕರೆ ಬೇಕೆ?”
ಸೂರ್ಯಪಾನ ಮಾಡಿ
ಸೂರ್ಯನಕಾಂತಿಯನ್ನು ಪಡೆದು ದೂರದ ಐವರಿ ಕೋಸ್ಟ್ ನಿಂದ ಮೇಘಗಳಮೇಲೆ ತೇಲಿಬಂದ ಕೃಷ್ಣಕುಮಾರಿ
ಲೊರೆನ್ ಅಂದು
ನನ್ನೆದುರು ಬಂದಾಗ ಅನ್ನಿಸಿದ್ದು ಹೀಗೆ. ಮಳೆ ನಿಂತು ಹೋದಮೇಲೆ ಕಾನನದಿಂದ ಬೀಸುವ ಥಣ್ಣನೆ ಗಾಳಿ ಊರೆಲ್ಲ
ವ್ಯಾಪಿಸಿ ಸಣ್ಣನೆ ನಡುಕ ಹುಟ್ಟಿಸುವಂತೆ ಈ ನೀರೆಯ ಕಣ್ಣೋಟಕ್ಕೆ ನಡುಗಿ ಹೋಗಿದ್ದೆ. ಲೊರೈನ್ ನನಗೆ ಕಳೆದ ಒಂದು ವರ್ಷದಿಂದ ಪರಿಚಿತಳಾಗಿದ್ದಳು. ತಾನೊಬ್ಬ ರೂಪದರ್ಶಿ
ಆಗಬೇಕೆಂಬ ಮಹಾದಾಸೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದಳು. ಬೆಂಗಳೂರು ಎಂಬ
ಸಿಲಿಕಾನ್ ನಗರಿ ಜಗದ ಮೂಲೆ ಮೂಲೆಗಳಿಂದ ಜನರನ್ನು ಆಕರ್ಷಿಸಿ ಕರೆತಂದಂತೆ ಸುಮಾರು ಐದುಸಾವಿರಕ್ಕೂ
ಹೆಚ್ಚು ವಿದ್ಯಾರ್ಥಿಗಳನ್ನು ಆಫ್ರಿಕಾ
ಖಂಡದ ಕೆಲವು ದೇಶಗಳಿಂದ ಕರೆತಂದಿದೆ. ಭಾರತದಂತಹ ದೇಶದಲ್ಲಿ ಚರ್ಮದ ಬಣ್ಣಕ್ಕೆ ಮತ್ತು ರೂಪಕ್ಕೆ ಇರುವ ಸಮೀಕರಣವನ್ನು
ಅವಳಿಗೆ ಬಿಡಿಸಿ ಹೇಳುವಿದು ಹೇಗೆಂದು ತೋಚದೆಯೋ, ಅಥವಾ ಅರಳಿದ ಈ
ಸಾವಿಲ್ಲದ ನಗೆಹೂವಿನ ಮುಖದ ಮೇಲೆ ಬಗೆ ಬಗೆ ಕನಸುಗಳ ವಿನ್ಯಾಸವನ್ನು ನೋಡಿ ಸಾಧ್ಯವಿಲ್ಲ ಎನ್ನಲು
ಮನಸಾಗದೆಯೋ, ರೊಪದರ್ಶಿಗಳ ಏಜನ್ಸಿ
ಒಂದನ್ನು ಹುಡುಕಿ ಕೊಡುವಾಗಿ ವಾಗ್ದಾನ ನೀಡಿ ಈಗ ಒಂದು ವರ್ಷವೇ ಕಳೆದಿತ್ತು. ಮೊನ್ನೆ ಕರೆ ಮಾಡಿದ ಲೊರೈನ್ ಒನ್ ಟೀಮ್ ಆಫ್ರಿಕಾ
ನೆಡೆಸುತ್ತಿರುವ ಸೌಂದರ್ಯ ಸ್ಪರ್ಧೆಯಲ್ಲಿ ತಾನು ಬಾಗವಹಿಸುತ್ತಿರುವುದಾಗಿ ಹೇಳಿದಳು. ಸ್ಪರ್ಧೆಯ ಹೆಸರು ಮಿಸ್ ಆಫ್ರಿಕಾ ಬೆಂಗಳೂರು !!!!
ಕಲ್ಯಾಣ ನಗರದ ಫುಟ್ಬಾಲ್ ಮೈದಾನ ಈ ಸಂಜೆ ಒಂದು ಹೂದೋಟದಂತೆ
ಕಾಣುತ್ತಿತ್ತು. ಕಂಚುವಾಳ,ಕನಕಾಂಬರ, ಕಮಲ, ಕಾಕಡ, ಗುಲಾಬಿ, ಕಣಿಗಿಲೆ, ತುಂಬೆ …… ಇಂದು ಮಿಸ್ ಆಫ್ರಿಕಾ ಬೆಂಗಳೂರು ಸ್ಪರ್ಧೆಯ ಮೂರನೆಯ
ಹಂತ. ಕಿನ್ನರಿಯರ ಎರಡು ತಂಡಗಳ
ನಡುವೆ ಫುಟ್ಬಾಲ್ ಹಣಾಹಣಿ. ಅಷ್ಟೇನೂ ಫುಟ್ಬಾಲ್
ಪ್ರೇಮಿಯಲ್ಲದ ನಾನು ಮೈದಾನದ ಅಂಚಿಗೆ ನಿಂತು ಲೊರೈನ್ ಗೆ ಚೀರ್ ಮಾಡಿ ಉತ್ಸಹ ತುಂಬಲು ತನ್ಮೂಲಕ ಅವಳ ಮೆಚ್ಚುಗೆ ಗಳಿಸಲು ಪ್ರಯತ್ನಿಸುತ್ತಿದ್ದೆ.
ಜೊತೆಗಿದ್ದ ಸ್ನೇಹಿತರಾರೂ ಮ್ಯಾಚ್ ನಲ್ಲಿ ಆಸಕ್ತಿಯಿಲ್ಲದೆ ಗ್ಯಾಲರಿಯ ಮೂಲೆಯಲ್ಲಿ ಗುಂಪಾಗಿ
ಕುಳಿತರು. ಮ್ಯಾಚ್ ನಡುವೆ ಲೊರೈನ್
ದರಿಸಿದ್ದ ಶೂ ಕಾಲು ಕಚ್ಚಲು ಶುರುಮಾಡಿದ್ದರಿಂದ ಆಕೆಯನ್ನು ಗೋಲ್ ಕೀಪರ್ ಮಾಡಿ ನಿಲ್ಲಿಸಲಾಯಿತು
ನಾನು ಮೈದಾನದ ಹೊರಗಿಂದ ಗೋಲ್ ಪೋಸ್ಟ್ ಬಳಿಯೇ ನಿಂತು ಅವಳ ಕಾಲುನೋವಿಗೆ ಸಹಬೂತಿ ವ್ಯಕ್ತ ಪಡಿಸಲು
ಪ್ರಯತ್ನಿಸಿದೆ. ನನ್ನೆಡೆಗೆ ತಿರುಗಿ ಒಮ್ಮೆ ಮುಗುಳು ನಕ್ಕಳು ಲೊರೈನ್. ಮನದಲ್ಲಿ ಬೇಂದ್ರೆ
ಪ್ರತಿದ್ವನಿಸಿದಂತಾಯ್ತು
ಚಿಗರಿಗಂಗಳ ಚೆಲುವಿ ಚೆದರಿ ನಿಂತಾಳ ನೋಡೋ
ಬೆದರಿ ನಿಂತಾಳ…
ಬೆದರಿ ನಿಂತಾಳ…
ಮ್ಯಾಚ್ ಮುಗಿಯುತ್ತಲೂ
ವ್ಯವಸ್ಥಾಪಕಿ ದೆಬೋರಾ ನಮ್ಮೆಡೆಗೆ ನೆಡೆದು ಬಂದಳು.
ಲೊರೈನ್ ನಿಮ್ಮಬಗ್ಗೆ ಈಗಲೇ
ಹೇಳಿದ್ದಾಳೆ. ನಿಮಗೆ ಬೇಕಾದ ವಿವರಗಳನ್ನು ನೀಡಲುಎಂದಳು ಒನ್ ಟೀಮ್ ಆಫ್ರಿಕಾ ತಯಾರಾಗಿದೆ ಎಂದಳು. ನಾನು ಮೊದಲು ಭೇಟಿ
ಆಗಬೇಕಾಗಿದ್ದುದು ರೊಸ್ಸಿ ಮೆಯುಂಡ ಎಂಬ ಕಾಂಗೊ ಮೂಲದ ವ್ಯಕ್ತಿಯನ್ನು. ಬೆಂಗಳೂರಿನಲ್ಲಿ ಬಿಬಿಎಂ ಓದುತ್ತಿರುವ ಮೆಯುಂಡ ಸ್ವತಃ ರೂಪದರ್ಶಿಯಾಗಿದ್ದು ಹಾಗು ರೂಪದರ್ಶಿಗಳಿಗಾಗಿ ಆರ್ ಎಂ ಡಿಸೈನ್
ಎಂಬ ಒಂದು ಏಜನ್ಸಿ ನೆಡೆಸುತ್ತಿದ್ದಾನೇನು
ಹೇಳಿಕೊಂಡ. “ಈ ನಮ್ಮ ಯೋಜನೆಯ ಉದ್ದೇಶ
ಹೆಣ್ಣಿನ ಗೌರವ ಮತ್ತು ಹೆಣ್ಣುತನದ ವಿವಿಧ ಮುಖಗಳ್ಳನ್ನು ಅನಾವರಣ ಮಾಡಿತೋರೋಸುವುದಲ್ಲದೆ
ಆಫ್ರಿಕಾ ಎನ್ನುವುದು ಒಂದು ದೇಶ ಎಂದು ತಿಳಿದಿರುವ ಬಹುಸಂಖ್ಯಾತ ಬೆಂಗಳೂರಿಗರಿಗೆ ಅದು ಹಲವು
ದೇಶಗಳನ್ನು ಒಳಗೊಂಡ ಒಂದು ಖಂಡವೆಂದು ತೋರಿಸಿಕೊಡುವುದು. ಬೆಂಗಳೂರಿನಲ್ಲಿ ನೆಲೆಸಿರಿವ ಎಲ್ಲ ಆಫ್ರಿಕನ್ ತರುಣಿಯರು ತಮ್ಮ ತಮ್ಮ ದೇಶಗಳನ್ನು ಪ್ರತಿನಿಧಿಸಿ ತಮ್ಮ ಸಮುದಾಯವನ್ನು
ಬೆಂಬಲಿಸಲು ಇದೊಂದ ಅವಕಾಶವಾಗಿದೆ” ಎಂದರು
ಫೆಮಿನಾ ಮಿಸ್ ಇಂಡಿಯಾದಂತ
ಕೆಲವೇ ಬ್ಯೂಟಿ ಪೆಜಂಟ್ಗಳ ಪರಿಚಯವಿರುವ ಬೆಂಗಳೂರಿಗರಿಗೆ ಈಗ ಮಿಸ್ ಆಫ್ರಿಕಾ ಬೆಂಗಳೂರು ನೋಡುವ
ಸಮಯ ಬಂದಿದೆ. ಆಫ್ರಿಕಾದ ವಿವಿಧ ದೇಶಗಳಿಂದ
ಬಂದಿರುವ ಜವ್ವನ, ಜವ್ವನೆಯರು ನಮ್ಮ ಸಿಲಿಕಾನ್ ನಗರಿಯಲ್ಲಿ
ವಿದ್ಯಾಭ್ಯಾಸಕ್ಕಾಗಿ ಕೆಲವು ವರ್ಷ ನೆಲೆನಿಂತಿದ್ದಾರೆ. ಬಹುಪಾಲು ಫ್ರಾಂಕೋಫೋನ್ ದೇಶಗಳಾದ (ಫ್ರೆಂಚ್ ಭಾಷೆ ಆಡಳಿತಭಾಷೆಯಾಗಿದೆ) ಕಾಂಗೊ, ಐವರಿ ಕೋಸ್ಟ್, ಕ್ಯಾಮೆರೂನ್, ಮಾಲಿ, ಮಡಗಾಸ್ಕರ್ ಗಳಿಂದ ಬಂದವರಾಗಿದ್ದರೂ ನಮೀಬಿಯಾ,
ದಕ್ಷಿಣ ಸುಡಾನ್, ಕೀನ್ಯಾ , ನೈಜೀರಿಯಾ ದಂತಹ ಆಂಗ್ಲೋಫೋನ್
ದೇಶಗಳಿಂದಲೂ (ಇಂಗ್ಲಿಷ್ ಆಡಳಿತ
ಭಾಷೆಯಾಗಿರುವ ) ಬಂದಿದ್ದಾರೆ.
ಮಾತು ಮುಂದುವರೆಸಿದ ಮೆಯುಂಡ “ಬೆಂಗಳೂರಿನಲ್ಲಿರುವ ಆಫ್ರಿಕನ್ ಸಮುದಾಯಗಳೆಲ್ಲ
ವಿಘಟಿತವಾಗಿವೆ. ಅವರನ್ನೆಲ್ಲ ಸಂಘಟಿಸಲು ಮಿಸ್ ಆಫ್ರಿಕಾ ಬೆಂಗಳೂರು ಒಂದು
ಕುತಂತ್ರವಾಗಿದೆ" ಎಂದು ಮುಗುಳು ನಕ್ಕರು. ನನ್ನ ಮುಖದಮೇಲಿನ ಪ್ರಶ್ನಾರ್ಥಕ ಚಿನ್ಹೆ ಯನ್ನು
ಗ್ರಹಿಸಿ ತುಂಟ ನಗೆ ಬೀರಿ ಹೇಳಿದರು, “ನೋಡಿ ಸೌಂದರ್ಯ
ಸ್ಪರ್ಧೆಯೆಂದರೆ ಮೊದಲು ಸುಂದರ ಹುಡುಗಿಯರೆಲ್ಲ ಒಟ್ಟಾಗುತ್ತಾರೆ. ಎಲ್ಲಿ ಸುಂದರ ಹುಡುಗಿಯರು
ಒಟ್ಟಾಗುತ್ತಾರೋ ಅಲ್ಲಿ ಹುಡುಗರ ದಂಡೇ ಸೇರಿಬಿದೆತ್ತದೆ ಹ್ಹ ಹ್ಹ ಹ್ಹಾ…..”
ಅಷ್ಟರವರೆಗೆ ಅಲ್ಲೆಲ್ಲೋ
ಪುರುಸೊತ್ತಿಲ್ಲದೆ ಅಡ್ಡಾಡುತ್ತಿದ್ದ ದೆಬೋರಾ ಬಂದಳು. ಬಿ ಸಿ ಎ ಓದುತ್ತಿರುವ ದೆಬೋರ ಸೌಂದರ್ಯ
ವಸ್ತ್ರವಿನ್ಯಾಸದ ಬಗ್ಗೆ ಬ್ಲಾಗ್ ಬರೆಯುತ್ತಾರೆ ಕೂಡ “ಸ್ಪರ್ಧೆಯಲ್ಲಿ ಮುಖ್ಯವಾಗಿ ನಾಲ್ಕು ಸುತ್ತುಗಳಿವೆ ಎಂದ
ಈ ಸ್ಪರ್ಧೆಯ ಸಹ
ವ್ಯವಸ್ಥಾಪಕಿ ದೆಬೋರ “ಎಲ್ಲ ಸಾಂಪ್ರದಾಯಿಕ ಸ್ಪರ್ಧೆಗಳಂತೆ ಕೇವಲ ದೇಹ
ಸೌಂದರ್ಯ ವನ್ನು ಅಳೆಯುವುದು ನಮ್ಮ ಉದ್ದೇಶವಲ್ಲ, ಬದಲಾಗಿ ಅವರ ವ್ಯಕ್ತಿತ್ವದ
ವಿವಿಧ ಹೊಳಹುಗಳನ್ನು ಪರಿಕಿಸಿ ನೋಡುವ ಒಂದು ಪ್ರಕ್ರಿಯೆ. ನಾಲ್ಕು ಹಂತಕಲು ನಾಲ್ಕು ಸವಾಲುಗಳು.
ಈ ಸವಾಲುಗಳನ್ನು ಎದುರಿಸುವಾಗ ಶ್ರದ್ಧಾಹೀನ ಸೋಮಾರಿ ಅಭ್ಯರ್ಥಿಗಳನ್ನು ಹೊರಕುಲಾಗುವುದು.
ಹನ್ನೆರಡೇಜನರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುವುದು" ಎಂದಳು.
ಆ ನಾಲ್ಕು ಸವಾಲುಗಳು
ಯಾವುವೆಂದು ಕೇಳಲಾಗಿ “ಮೊದಲ ಸುತ್ತು ಸಾಂಪ್ರದಾಯಿಕ
ನೃತ್ಯ. ಸ್ಪರ್ದಿಗಳು ತಮ್ಮ ತಮ್ಮ ದೇಶದ ಸಾಂಪ್ರದಾಯಿಕ ಉಡುಗೆ ತೊಟ್ಟು ನರ್ತಿಸಬೇಕು. ನಮ್ಮ
ಆಫ್ರಿಕನ್ ಜೀವನ ಶೈಲಿಯಲ್ಲಿ ನೃತ್ಯವೆಂಬುದು ಅವಿಬಾಜ್ಯ ಅಂಗ. ಎರಡನೆಯ ಸುತ್ತು ಚರ್ಚಾ ಸ್ಪರ್ಧೆ. ಆಫ್ರಿಕನ್ ಮಹಿಳೆಯ
ಅಸ್ತಿತ್ವ, ಸಮಾಜದಲ್ಲಿ ಆಕೆಯ ಜವಾಬ್ದಾರಿಗಳು ಇವೆಮುಂತಾದ ವಿಷಯಗಳ
ಬಗ್ಗೆ ವಾದ ಮಂಡಿಸಬೇಕಾಗುತ್ತದೆ. ಮೂರನೆಯ ಸುತ್ತು ನೀವು ಈಗಷ್ಟೇ ನೋಡಿದ್ದು, ಫುಟ್ಬಾಲ್ ಪಂದ್ಯ. ನಮ್ಮ ದೇಶಗಲ್ಲಿ ಫುಟ್ಬಾಲ್ ತುಂಬ
ಜನಪ್ರಿಯ ಕ್ರೀಡೆ. ಆಫ್ರಿಕನ್ ಮಹಿಳೆ ಥಳುಕು
ಬಳುಕಿನ ದುರ್ಬಲೆ ಯಲ್ಲ. ದೈಹಿಕ ವಾಗಿ ಕೂಡ ಆಕೆ ಸದೃಡಳು ಎಂದು ನಸುನಕ್ಕಳು…
“ಮತ್ತೆ ನಾಲ್ಕನೆಯ ಸುತ್ತು
ಯಾವುದೆಂದು ಹೇಳಿ” ಎನ್ನಲು, “ಊಹಿಸಿ ನೋಡಣ” ಎಂದು ನನಗೇ ಸವಾಲೆಸೆದಳು. ಮಾನಸಿಕ ಮತ್ತು ದೈಹಿಕ ಸದೃಢತೆಗೆ ಮುಖ್ಯವಾಗಿರುವ ಕಲೆ
ಅದು ಎಂದಳು. ತಲೆಯಲ್ಲಿ ಬೇಡದ ಕಲ್ಪನೆ
ಗಳೆಲ್ಲ ಬಂದರೂ ಅವನ್ನೆಲ್ಲ ಸೆನ್ಸಾರ್ ಮಾಡಿ ಅದು ಅದು ಪಾಕ ಶಸ್ತ್ರವೇ ಇರಬೇಂದು ತೀರ್ಮಾನಿ
ಅಡುಗೆ ಮಾಡುವ ಸ್ಪರ್ದೆಯೇ ಎಂದು ಕೇಳಿದೆ. ಸರಿಯಾಗಿ ಊಹಿಸಿದರೆ ಅದಕ್ಕೆ ನಿಮ್ಮನ್ನು ಈಗಲೇ
ಆಮಂತ್ರಿಸಿದ್ದೇನೆ ಎಂದಳು. ಛೆ ಛೆ ನಾನು
ಪಾಕಶಾಸ್ತ್ರದಲ್ಲಿ ನಾನು ಸ್ವಲ್ಪ ವೀಕು ಅಂದೆ. ನೀವು ಅಡುಗೆ ಮಾಡಬೇಕಾಗಿಲ್ಲ ಆಫ್ರಿಕಾದ ಕೆಲವು ಸುಂದರ ಕೈಗಳು ನಿಮಗೋಸ್ಕರ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು
ತಯಾರಿಸಿಡುತ್ತವೆ ನೀವು ಬಂದು ರುಚಿ ನೋಡಿ ಸಾಕು ಎಂದಳು.
ಅಂತಿಮವಾಗಿ ನಮ್ಮಸುಂರಿಯರೆಲ್ಲರನ್ನು
ಅನಾಥಾಶ್ರಮವೊಂದಕ್ಕೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿ ದೇಶ ಭಾಷೆಗಳನ್ನು ಮೀರಿ ಮಕ್ಕಳೊಂದಿಗೆ
ಬೇರೆಯ ಬೇಕು. ಸುಮ್ಮನೆ ಹೋಗುವುದುಲ್ಲ , ನಮ್ಮ ಕಡೆಯಿಂದ ಕೆಲವು
ಉಡುಗೊರೆಗಳನ್ನೂ ಹೋತೋಯ್ಯುತ್ತೇವೆ.
ಎಲ್ಲಿ ನಿಮ್ಮ ಸುಂದರಿಯರನ್ನು
ನಮಗೂ ಪರಿಚಯಿಸಿ ಎಂದು ಕೇಳಿದೆ ಮೊದಲನೆಯ ಸಂದರ್ಶನಕ್ಕೆ ನನ್ನ ನಲ್ಮೆಯ ಸುಂದರಿ ಲೊರೈನ್ ನನ್ನೇ ಆಯ್ಕೆ
ಮಾಡಿಕೊಂಡೆ. ನಾನು ಮೊದಲೇ ಹೇಳಿದಹಾಗೆ ಲೊರೈನ್ ಐವರಿ ಕೋಸ್ಟ್ ದೇಶದ ಅಬಿದ್ಜಾನ್ ಎಂಬ ನಗರದವಳು.
“ನಾನು ಜೀವನದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಅಡಿಯಿಟ್ಟು
ನೋಡ ಬಯಸುವಳು. ಏಕಂದರೆ ನನ್ನ ವಯಸ್ಸಿನಲ್ಲಿ ಅದೃಷ್ಟ
ನಗೋಸ್ಕರ ಏನು ಕಾಯ್ದಿಟ್ಟಿದೆ ಎಂದು ಊಹಿಸುವುದು ಕಷ್ಟ. ನಾನು ಯಾವಾಗಲು ಸೌಂದರ್ಯ ರಾಣಿಯಾಗಲು ಕನಸು
ಕಾಣುತ್ತಿದೆ. ಒನ್ ಟೀಮ್ ಆಫ್ರಿಕಾ ಸೌಂದರ್ಯ ಸ್ಪರ್ಧೆಯ ಘೋಷಣೆ ಮಾಡಿದಾಗ ಭಾಗವಸಿದಿರಲು ನನಗೆ
ಕಾರಣಳೇ ಇರಲಿಲ್ಲ” ಎಂದುಳು ನನ್ನ ಸ್ವಪ್ನ
ಸಾಮ್ರಾಗ್ನಿ ಲೊರೈನ್.
ಮುಗಿಲ ಮಾರಿಗೆ ರಾಗ ರತಿಯ
ನಂಜು ಏರಿದಂತೆ ಸುಂದರ ನಗು ,ಸಣ್ಣ ನಡುವಿನ ಹದಿನೆಂಟರ ಪೋರಿ ನೈಜೀರಿಯಾದ ಫ್ರಾನ್ಸೆಸ್ ಓದೂಝೆ, ಎಲ್ಲಕಿಂತ ಹೆಚ್ಚಾಗಿ ಚರ್ಚಾ ಸ್ಪರ್ಧೆಯನ್ನು
ಆನಂದಿಸಿದಳಂತೆ. ಏಕೆಂದರೆ ಫ್ರಾಂಕೋಫೋನ್ ಹುಡುಗಿಯರಿಗೆ ಇಂಗ್ಲಿಷ್ ನದ್ದೇ ಸಮಸ್ಯೆ. ಅಂಗ್ಲೋಫೋನ್ ಆದ ಓಡುಝೆ
ಇಂಗ್ಲೀಷನನ್ನು ಚೆನ್ನಾಗಿ ಮಾತಾಡ ಬಲ್ಲಳು. ಚರ್ಚಾ ಗೋಷ್ಠಿಯಲ್ಲಿ ಎಲ್ಲರನ್ನು ಹಿಂದಿಕ್ಕುವುದು ಅವಳಿಗೆ
ಬಹುಸುಲಭವಾಗಿತ್ತಂತೆ. ಫ್ರೆಂಚ್ ಮಾತಾಬಲ್ಲ
ಕನ್ನಡಿಗನಾದ ನನಗಾದರೋ ಫ್ರಾಕೋಫೋನ್ ಮತ್ತು ಆಂಗ್ಲೋಫೋನ್
ಸುಂದರಿಯರನ್ನು ಅವರಿಗೆ ಸುಲಭವಾದ ಭಾಷೆಯಲ್ಲಿ ಮಾತನಾಡಿಸುವುದು ಕಷ್ಟವೇನಾಗಿರಲಿಲ್ಲ.
ಕೆಮರೂನ್ ದೇಶದ ಬ್ರಿo ದಾ ಕಳೆದ
ವರ್ಷದ ಮಿಸ್ ಕ್ಯಾಮರೂನ್ ಬೆಂಗಳೂರು ಸ್ಪರ್ಧೆಯ ವಿಜೇತೆ ವಿಜೇತೆಯಾದ್ದರಿಂದ ಈ ಸ್ಪರ್ಧೆಯನ್ನು ಗೆಲ್ಲುವ
ಬಗ್ಗೆ ಸಂಪೂರ್ಣ ಆತ್ಮ ವಿಶ್ವಾಸವಿದೆ ಎಂದಳು.
ಗೋದ್ರೇಜ್ ಪ್ರಾಯೋಜಿತ ವಿಶ್ವ
ಸುಂದರಿ ಕಿರೀಟವನ್ನು ೧೦೯೬ ರಲ್ಲಿ ಮುಡಿಗೇರಿಸಿದ ಗ್ರೀಕ್ ಸುಂದರಿ ಇರೆನ್ ಸ್ಟೆಲ್ವ ಬೆಂಗಳೂರನ್ನು ಉದ್ಯಾನ ನಗರಿ ಎಂದು ಹೊಗಳಿದ್ದು ಈಗ ಹಳತಾಗಿ ಹೋಯಿತು. ಬೆಂಗಳೂರು ಇತ್ತೀಚಿಗೆ ಜಗತ್ತಿನ ಎಲ್ಲ ವೈದ್ಯಗಳನ್ನು
ಒಳಗೊಳುತ್ತಿದೆ. ಹಲವು ದೇಶಗಳ ಜನ ವಾಣಿಜ್ಯ ವಿಜ್ಞಾನ ತಂತ್ರಜ್ಞಾನವನ್ನು ಅರಸಿ ಇಲ್ಲಿಗೆ
ಬರುತ್ತಾರೆ. ಲೊರೈನ್ ನಂತಹ ಹದಿಹರೆಯದ
ಆಫ್ರಿಕನ್ ಸುಂದರಿಯರಿಗೆ ಬೆಂಗಳೂರು ಶಿಕ್ಷಣದ ಕರ್ಮಭೂಮಿ. ಹರೆಯದ ನೂರಾರು ಕನಸುಗಳನ್ನು ಹೊತ್ತು ಬರುವ ಯುವಕ
ಯುವತಿಯರು ಏನನ್ನಾದರೂ ಸಾಧಿಸಬೇಕೆಂಬ ಛಲ ಹೊತ್ತಿರುತ್ತಾರೆ. ಕಂಪ್ಯೂಟರ್, ಫಾರ್ಮಸಿ,
ವಾಣಿಜ್ಯ ಶಾಸ್ತ್ರ ದಂತಹ
ವಿಷಯಗಳನ್ನೂ ಅಭ್ಯಾಸ ಮಾಡುತ್ತಿರುವ ಇವರು ಈ ಊರಿನ ಬಗ್ಗೆ ತಮ್ಮ ದೇಶಗಳಲ್ಲಿ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.
ಅಲ್ಲಿಯ ಯುವ ಜನಾಂಗದಲ್ಲಿ ಬೆಂಗಳೂರು ಈಗ ಮನೆ ಮಾತಾಗಿದೆ. ದೆಬೋರ ಹೇಳಿದಳು " ನಮಗೆ ಬೆಂಗಳೂರಿನ್ನಲ್ಲಿ
ಸಿಗುವ ಎಲ್ಲ ಅವಕಾಶಗಳನ್ನು ಬಳಸಿ ಕೊಂಡು ನಮ್ಮ ಭವಿಷ್ಯತ್ತನ್ನು ರೂಪಿಸಿಕೊಳ್ಳುವ ಆಸೆಯಿದೆ. ಅವಕಾಶಗಳು
ಕಡಿಮೆ ಇದ್ದಲ್ಲಿ ಸುಮ್ಮನೆ ಕೂರದೆ ಅವನ್ನು ನಾವೇ ಸೃಷ್ಟಿಕೊಳ್ಳುವ ಛಲ ನಮ್ಮದು. ಸೌಂದರ್ಯ
ಸ್ಪರ್ಧೆ ಇದರ ಭಾಗವಾಗಿದೆ ಎಂದಳು.
ಜಗತ್ತಿನ ೨೭ ನೇ ದೊಡ್ಡ
ನಗರವಾಗಿರು ಬೆಂಗಳೂರಿನಲ್ಲಿ ಕಮ್ಮನ ಹಳ್ಳ್ಳಿ ಬಾಣಸವಾಡಿ , ಕಲ್ಯಾಣ ನಗರ ಹೊರಮಾವುಗಳಂತಹ ಜಾಗಗಲ್ಲಿ ಆಫ್ರಿಕಾ ಮಾತ್ರವಲ್ಲದೆ ಮದ್ಯ
ಪ್ರಾಚ್ಯ, ಪೆಸಿಫಿಕ್ ದ್ವೀಪ ಗಳಿಂದ
ಬಂದಿರುವ ವಿದ್ಯಾರ್ಥಿಗಳು ಇದಾರೆ. ಇಲ್ಲಿ ಒಂದು
ತಣ್ಣನೆಯ ಮುಂಜಾವು ನೀವೊಬ್ಬ ಯೆಮೆನಿ ಅಥವಾ ಫಿಜಿ ದೇಶದ ವಿದ್ಯಾರ್ಥಿಯನ್ನು ಬೆಳಗಿನ ಚಹಾ
ಸೇವಿಸುತ್ತಾ ಹೋಟೆಲೊಂದರಲ್ಲಿ ಭೇಟಿಯಾದರೆ ಆಚರ್ಯವಿಲ್ಲ.
ಎಲ್ಲ ದುಗುಡಗಳು ಆರ್ಥಿಕ ಸಂಕಷ್ಟಗಳ
ನಡುವೆ ಒನ್ ಟೀಮ್ ಆಫ್ರಿಕಾ ತಂಡ ಮುನ್ನೆಡೆದಿದೆ. ವಿದ್ಯಾರ್ಥಿಗಳಾದ್ದರಿದ ಆರ್ಥಿಕ
ಸಂಕಷ್ಟಗಳಿವೆ. ಪರದೇಶದವರಾದ್ದರಿಂದ ಯಾವುದೇ ಪ್ರಾಯೋಜಕತ್ವ ಸಿಗುವುದು ಕಷ್ಟಸಾಧ್ಯ. ಸಾದಿಸುವ ಹುಮ್ಮಸ್ಸು
ತಾಯಿ ಆಫ್ರಿಕಾಳ ಆಶೀರ್ವಾದ ಎರಡೇ ನಮಗೆ
ಶ್ರೀರಕ್ಷೆ ಎನ್ನುತ್ತಾಳೆ ದೆಬೋರ. ಅಂದ ಹಾಗೆ ಡಿಸೆಂಬರ್ ಇಪ್ಪತೈದರಂದು ನೆಡೆಯುವ ಅಂತಿಮ
ಸುತ್ತಿಗೆ ತಮ್ಮೆಲ್ಲಗೂ ಸ್ವಾಗತ.
: ಅವಿನಾಶ ತೋಟದ ರಾಜಪ್ಪ
No comments:
Post a Comment