Tuesday, December 26, 2017

ಮಿಸ್ ಆಫ್ರಿಕಾ ಬೆಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ಕ್ಯಾಮರೂನ್ ದೇಶದ ಸಿಂತಿಯ ೨೦೧೭ ಮಿಸ್ ಆಫ್ರಿಕಾ ಬೆಂಗಳೂರು ಆಗಿ ಆಯ್ಕೆಯಾಗಿದ್ದಾರೆ.

ನಿನ್ನೆ ನೆಡೆದ ಮಿಸ್ ಆಫ್ರಿಕಾ ಬೆಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ಕ್ಯಾಮರೂನ್ ದೇಶದ ಸಿಂತಿಯ ೨೦೧೭ ಮಿಸ್ ಆಫ್ರಿಕಾ ಬೆಂಗಳೂರು ಆಗಿ ಆಯ್ಕೆಯಾಗಿದ್ದಾರೆ. ಮೊದಲ ರನ್ನರ್ ಅಪ್ ಆಗಿ ನೈಜೀರಿಯಾದ ಫ್ರಾನ್ಸೆಸ್  ಒಡುಂಜೆ ಎರಡನೆಯ ರನ್ನರ್ ಅಪ್ ಆಗಿ ಕಾಂಗೊ ದೇಶದ ರಾಚೆಲ್ ಮುಕೇಬ ಆಯ್ಕೆಯಾಗಿದ್ದಾರೆ. ಮಿಸ್ ಆಫ್ರಿಕಾ ಬೆಂಗಳೂರು ಎರಡನೆಯ ಸಂಪುಟ ಮುಂದಿನ ವರ್ಷ ಜೂನ್ ತಿಂಗಳಿನಲ್ಲಿ ನೆಡೆಯಲಿದೆ ಎಂದು ಸ್ಪರ್ಧೆಯ ವ್ಯವಸ್ಥಾಪಕ ರೊಸಿ ಮೆಯುಂಡ ತಿಳಿಸಿದ್ದಾರೆ. ಪ್ರಜಾವಾಣಿಯಲ್ಲಿ ಈಗಾಗಲೇ ವರದಿಯಾದಂತೆ ದಿನಾಂಕ ೨೫ ಡಿಸೆಂಬರ್ ೨೦೧೭ ರ ರಾತ್ರಿ ಬಾನಸ್ವಾಡಿಯಲ್ಲಿ  ಈ ಸ್ಪರ್ಧೆ ನೆಡೆಯಿತು. ಅಂತಿಮಸುತ್ತಿನಲ್ಲಿ ಸುಂದರಿಯರ ಬುದ್ದಿ ಶಕ್ತಿ ಸಾಮಾನ್ಯ ಜ್ಞಾನಗಳ ಮೇಲಾಧಾರಿಸಿ ಪ್ರಶ್ನೆಗಳನ್ನು ಕೇಳಲಾಯಿತು. ಎಂತಿಮ ಹಂತಕ್ಕೆ ಹನ್ನೊಂದು ಸುಂದರಿಯರು ಆಯ್ಕೆಯಾಗಿದ್ದರು. ಸ್ಪರ್ಧೆಯಲ್ಲಿ ಗೆದ್ದ ಸಿಂತಿಯ ಮುಂಬರುವ ಎಲ್ಲ ಮಿಸ್ ಆಫ್ರಿಕಾ ಸ್ಪರ್ದಿ ಗಳಿಗೆ ತಾವು ಮಾದರಿ ಆಗಬಯಸುವುದಾಗಿ ಹಾಗು ಬೆಂಗಳೂರಿನ ಆಫ್ರಿಕನ್ ಸಮುದಾಯಕ್ಕೆ ಆತ್ಮ ವಿಶ್ವಾಸ ತುಂಬುವುದಾಗಿ ತಿಳಿಸಿದರು.

No comments:

Post a Comment